
2nd March 2025
ಬೀದರ. ಮಾ. 01 :- ರಾಜ್ಯ ದ ಮುಖ್ಯಮಂತ್ರಿಯಾದ ಸಿದ್ರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಿಂದ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ದಿಗಾಗಿ ಅವ್ಯವಯದಲ್ಲಿ ಮೀಸಲಿಟ್ಟ ಹಣವನ್ನು ದುರ್ಬಳಿಕೆ ಮಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಅನ್ಯಾಯ ಮಾಡಲಾಗಿದೆ ಇದರ ವಿರುದ್ಧ ಜಿಲ್ಲಾ ಭಾರತೀಯ ಜನತಾ ಪಾರ್ಟಿಯಿಂದ ಮಾ.೪ ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಜಿಲ್ಲೆಯ ೫ ಸಾವಿರ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆಂದು ರಾಜ್ಯ ಬಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ ಹಾಗೂ ಬೀದರ ದಕ್ಷೀಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆಯವರು ಇಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪ್ರತಿಭಟನೆಯ ಪೂರ್ವ ಭಾವಿ ಸಿದ್ದತಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಕಾಂಗ್ರೇಸ್ ಸರ್ಕಾರದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಯನ್ನು ಕಾಂಗ್ರೇಸ್ ಪಕ್ಷದ ಮಾತ್ರ ಸಾಧ್ಯ ಎಂದು ಚುನಾವಣೆಯ ಸಮಯದಲ್ಲಿ ಜನರಿಗೆ ಹೇಳಿ ಅಧಿಕಾರದ ಚುಕ್ಕಾಣಿ ಹಿಡಿಯಿತು ಆದರೆ ಅಹಿಂದ ನಾಯಕರು ಎಂದು ಅನುಕೊಳ್ಳುತ್ತಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಸದರಿ ಸಮಾಜದ ಅಭಿವೃದ್ಧಿಗಾಗಿ ಮೀಸಲಟ್ಟ ಹಣವನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೊಜನೆಗಳಿಗಾಗಿ ಉಪಯೋಗಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗಕ್ಕೆ ಅನ್ಯಾಯ ಮಾಡಿದ್ದಾರೆ.
ಇದನ್ನು ಖಂಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿಪಕ್ಷದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಇದರಂತೆ ಬೀದರನಲ್ಲಿಯೂ ಕೂಡಾ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಈ ಪ್ರತಿಭಟನೆಯಲ್ಲಿ ಸಾಂಸದರು ಹಾಗೂ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ್ ಕಾರಜೋಳ, ಶಾಸಕರಾದ ಸಿಮೆಂಟ್ ಮಂಜು, ಕೃಷ್ಣ ನಾಯಕ ಹಡಗಲಿ, ರಾಜ್ಯ ಮುಖ್ಯ ವಕ್ತರರಾದ ಅಶ್ವತ್ ನಾರಾಯಣ, ಮಾಜಿ ಶಾಸಕರುಗಳಾದ ಎಸ್.ಡಿ. ರಾಮಚಂದ್ರ, ಸೋಮಲಿಂಗಪ್ಪ್, ರಾಷ್ಟಿçÃಯ ಎಸ್ಸಿ ಮೋರ್ಚಾದ ಕಾರ್ಯದರ್ಶಿಗಳಾದ ಜೈಕುಮಾರ ಕಾಂಗೆ, ಪ್ರಮುಖರಾದ ಫರ್ನಾಂಡಿಸ್ ಹಿಪ್ಪಳಗಾಂವ, ಕು.ಲಲಿತಾ ಅನಾಪುರ ಹಾಗೂ ಅಂಬರಾಯ ಅಷ್ಟಗಿ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಸದಸ್ಯರು , ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಗಳು ಪಾಲ್ಗೊಳ್ಳಲಿದ್ದಾರೆ ಈ ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾದ ಸೋಮನಾಥ ಪಾಟೀಲ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಳ್ಳಬೇಕದರು. ಈ ಪೂರ್ವಭಾವಿ ಸಬೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷರಾದ ರವಿ ನಿಜಾಂಪೂರೆ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಗುಂಡಪ್ಪ ಬುಧೆರಾ, ಜಿಲ್ಲಾ ವಕ್ತಾರರಾದ ಸುಧೀರ ಕಾಡೋದೆ, ಮಾಧ್ಯಮ ಪ್ರಮುಖರಾದ ಶ್ರೀನಿವಾಸ ಚೌದರಿ, ಸಹ ಪ್ರಮುಖರಾದ ಸಂಗಮೇಶ ನಾಸಿಗಾರ , ಬೀದರ ನಗರ ಗಟಕದ ಅಧ್ಯಕ್ಷರಾದ ಶಶಿ ಹೊಸಳ್ಳಿ, ಬೀದರ ಗ್ರಾಮಾಂತರ ಘಟಕದ ಅಧ್ಯಕ್ಷರಾದ ದೀಪಕ ಗಾದಗೆ, ರಾಜಶೇಖರ ನಾಗಮೂರ್ತಿ ಸೇರಿದಂತೆ ಪಕ್ಷದ ಇತರ ನಾಯಕರು ಉಪಸ್ಥಿತರಿದ್ದರು.
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
'ನೀರು, ಮಣ್ಣು ದೇವರು ಕೊಟ್ಟ ಕಾಣಿಕೆ ಅದು ಸಂರಕ್ಷಣೆ ಮಾಡಬೇಕು' ಶಿವಶೇಖರ ಸ್ವಾಮಿ ಜಲಾನಯನ ಯಾತ್ರೆ